ಬಣ್ಣಗತ್ತಲು
ಕಗ್ಗತ್ತಲಲ್ಲೊಂದು ಬಣ್ಣದ ಬದುಕಿನ ಹುಡುಕಾಟ ...
ಗುರುವಾರ, ಮೇ 11, 2017
ಬಂದುಬಿಡು ನಲ್ಲೆ
ಬಂದುಬಿಡು ನಲ್ಲೆ
ನೋಡಿಯೂ ನೋಡದ ಹಾಗಿದ್ದ
ಆ ನಿನ್ನ ಓರೆಗಣ್ಣ ನೋಟ,
ಕಾಡಿಗೆ ಇಟ್ಟ ಆ ನಿನ್ನ ಕಂಗಳು,
ಕಣ್ಣ ರೆಪ್ಪೆಗೆ ಮುತ್ತಿಡುವ ಮುಂಗುರುಳು,
ಕನಸಲ್ಲೂ ಕಾಡುವ ನಿನ್ನ ಅಂದ ,
ಬಂದುಬಿಡು ನಲ್ಲೆ,
ಕಾಡ ಬೆಳದಿಂಗಳಲ್ಲಿ
ಅವನಂದವೇ ಚಂದ ಎಂದು
ಮೆರೆಯುವ ಚಂದಮಾಮನಿಗೊಮ್ಮೆ
ನಿನ್ನ ತೋರಿಸಬೇಕಿದೆ.
- ಫಣೀಶ್ ದುದ್ದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ