ಗುರುವಾರ, ಮಾರ್ಚ್ 9, 2017

ಮನೆ

ಮನೆ
 
ನಮ್ಮನೆ, ನಿಮ್ಮನೆ,
ನೆರೆ ಮನೆ, ಹೊರ ಮನೆ,
ಯಾವ ಮನೆಯಿಲ್ಲೀಗ
ಯಾರ ಮನೆಯೋ ?

 
ನಮ್ಮದು, ನಿಮ್ಮದು,
ಎಂಬುದೇ ಸುಳ್ಳದು,
ಅವನೊಬ್ಬನಾಟವೇ
ದಿಟವಾದ ಪಾಠವು

 
ನೆನ್ನೆಯು ಅಳಿದೆದೆ,
ನಾಳೆಯು ಬರಲಿದೆ,
ಇಂದಿನ ದಿನವಿದೋ
ನಿಜವಾದ ಜೀವನ

 
ಜಾತಿಯಾ ಮರೆಯಿರಿ
ಭೇಧವಾ ತೊರೆಯಿರಿ
ಬನ್ನಿರಿ ಕೂಡುವಾ
ಅವನ ಮನೆಯಂಗಳದಿ ಆಡುವಾ.-ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ