ಸುಮಾರು
ವರ್ಷಗಳ ಹಿಂದೆ ಪ್ರಜಾವಾಣಿ
ಪತ್ರಿಕೆಯಲ್ಲಿ ನಾಗತೀಹಳ್ಳಿ
ಚಂದ್ರಶೇಖರ್ ಅವರ ರೆಕ್ಕೆ -
ಬೇರು
ಎಂಬ ಒಂದು ಅಂಕಣ ಓದಿದ ನೆನಪು.
ಈಗಲೂ
ಆ ಅಂಕಣ ಪ್ರಕಟವಾಗುತ್ತಿದೆಯೋ
ಇಲ್ಲವೋ ಗೊತ್ತಿಲ್ಲ ,
ನಾನು
ಇತ್ತೀಚೆಗೆ ಅದರ ಕಡೆ ಹೆಚ್ಚಾಗಿ
ಗಮನ ಕೊಟ್ಟಿಲ್ಲ.
ಆದರೆ
ಮೊನ್ನೆ ಅವರದೇ ನಿರ್ದೇಶನ ಅಮೇರಿಕಾ
ಅಮೇರಿಕಾ ಸಿನಿಮಾದಲ್ಲಿ ರೆಕ್ಕೆ
ಬೇರುಗಳ ಕುರಿತಾದ ಪುಟ್ಟ ಚರ್ಚೆ
ನೋಡುವಾಗ ಆ ಅಂಕಣ ನೆನಪಿಗೆ ಬಂತು.
ಆ ಅಂಕಣಕ್ಕೆ ರೆಕ್ಕೆ ಬೇರು ಎಂದು ಏಕೆ ಹೆಸರಿಟ್ಟಿದ್ದರು ಎಂದು ಬಹಳ ಯೋಚಿಸುತ್ತಿದ್ದೆ.
ಈ ರೆಕ್ಕೆಗೂ ಬೇರಿಗೂ ಎತ್ತಣಿಂದೆತ್ತ ಸಂಬಂಧ ..?
ರೆಕ್ಕೆ ಇದ್ದಲ್ಲಿ ಬೇರು ಬಿಡಲು ಎಲ್ಲಿ ಸಾಧ್ಯ ..? ಅಥವಾ ಬೇರು ಬಿಟ್ಟರೆ ರೆಕ್ಕೆ ಇದ್ದು ತಾನೆ ಏನು ಪ್ರಯೋಜನ ..?
ಆ ಸಿನಿಮಾವನ್ನು ಹಿಂದೊಮ್ಮೆ ನೋಡಿದ್ದರೂ , ಮೊನ್ನೆ ಮತ್ತೆ ನೋಡಿದಾಗಿನಿಂದ ಆ ಪ್ರಶ್ನೆ ಮನದೊಳಗೆ ಒಂದೇ ಸಮನೆ ಕಾಡುತ್ತಿದೆ.
ಹೌದು , ಮನುಷ್ಯನಿಗೆ ರೆಕ್ಕೆ ಇರಬೇಕಾ ..? ಬೇರು ಇರಬೇಕಾ ..?
ತನಗೆ ರೆಕ್ಕೆ ಇರಬೇಕು , ಹಕ್ಕಿಗಳ ರೀತಿ ಬೆಟ್ಟ , ಗುಡ್ಡ , ನದಿ , ಸಮುದ್ರಗಳ ಮೇಲೆ ಸ್ವಛ್ಛಂದವಾಗಿ ಹಾರಾಡಬೇಕು , ವಿಶಾಲವಾದ ಈ ಪ್ರಪಂಚವನ್ನು ನೋಡಬೇಕು ಎನಿಸುವುದು ಎಷ್ಟು ಸಹಜವೋ , ಇದ್ದ ಜಾಗದಲ್ಲೇ ಆಳವಾಗಿ ಬೇರು ಬಿಟ್ಟು , ಇಲ್ಲೆ ಹೆಮ್ಮರವಾಗಿ ಬೆಳೆಯಬೇಕು , ನಮ್ಮ ಭೂಮಿಯ ರಸವನ್ನು ಹೀರಿ ಇಲ್ಲೇ ಫಲ ಕೊಡಬೇಕು , ಎನಿಸುವುದು ಅಷ್ಟೇ ಸಹಜ .
ಒಮ್ಮೆ ನಿಮಗೆ ನೀವೇ ಈ ಪ್ರಶ್ನೆ ಕೇಳಿ ನೋಡಿ.
ಮನುಷ್ಯನ ಮನಸ್ಸು ಮರ್ಕಟವಿದ್ದಂತೆ, ಒಮ್ಮೆ ಹೀಗನಿಸಿದರೆ, ಇನ್ನೊಮ್ಮೆ ಹಾಗನಿಸುತ್ತದೆ.
ಅದೆಲ್ಲಾ ಅವರವರ ಭಾವಕ್ಕೆ , ಅವರವರ ಭಕುತಿಗೆ ತಕ್ಕಂತೆ, ಜೊತೆಗೆ ಸಮಯಕ್ಕೆ ತಕ್ಕಂತೆ ಕೂಡ.
ಆದರೆ ಈ ರೆಕ್ಕೆ ಕಟ್ಟಿಕೊಂಡು ಎಷ್ಟು ದೂರ ತಾನೆ ಹಾರುವುದಕ್ಕಾಗುತ್ತದೆ ಹೇಳಿ ?.
ಬೇರು ಬಿಡಲಿಲ್ಲವೆಂದರೂ , ಒಂದಲ್ಲಾ ಒಂದು ದಿನ ಗೂಡನ್ನಾದರೂ ಕಟ್ಟಲೇಬೇಕು. ಆಗ ಬೇಕಾಗುವುದು ಆಳವಾಗಿ ಬೇರೂರಿ ಬೆಳೆದಿರುವ ಹೆಮ್ಮರವೇ ಹೊರೆತು , ರೆಕ್ಕೆಗಳಲ್ಲ.
ಈ ರೆಕ್ಕೆಗಳನ್ನು ಕಟ್ಟಿಕೊಂಡು ಅದೆಷ್ಟು ದೂರ ಹಾರುತ್ತೇನೋ ಗೊತ್ತಿಲ್ಲ. ಆದರೆ ರೆಕ್ಕೆ ಕಟ್ಟಿಕೊಂಡು ಹಾರಿ ಬಂದವರಿಗೆ , ಗೂಡು ಕಟ್ಟುವುದಕ್ಕಾದರೂ ಆಳವಾಗಿ ಬೇರು ಬಿಟ್ಟು , ಹೆಮ್ಮರವಾಗಿ ಬೆಳೆಯುವಾಸೆ.

- ಫಣೀಶ್
ದುದ್ದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ